Friday, January 23, 2009

ನೆನಪುಗಳ ಹನಿ ಹನಿ




ಜಿನುಗುತಿದೆ ಮನದಲ್ಲಿ ಪ್ರೀತಿಯ ಸಿಹಿ ಹನಿ,
ಅದು ಅವಳು ಬಿಟ್ಟುಹೋದ ನೆನಪುಗಳ ಜೇನ ಹನಿ,
ಇರುಳಲ್ಲಿ ನಾ ಪಡೆದ ಮುತ್ತುಗಳ ಹನಿ ಹನಿ,
ಇದು ಮನಸಿನ ಮಾತುಗಳಿಗೆ ಜೋತೆಯಾದವಳ ಕಹಾನಿ,


ಕನಸುಗಳಲ್ಲೇ ನೆಂದಿದ್ದೆ, ಕಲ್ಪನೆಗಳಲ್ಲೇ ಮಿಂದಿದ್ದೆ,
'ಪ್ರೀತಿಸುವೆ ನಿನ್ನೆ' ಎಂದಾಗ ಜಗವನ್ನೇ ಮರೆತಿದ್ದೆ,
ಪ್ರತಿ ಕ್ಷಣವೂ ಸ್ಮರಿಸಿದ್ದೆ, ಸಿಹಿ ಕನಸುಗಳ ಕಂಡಿದ್ದೆ,
ನನಗಾಗಿ ಕಾದವಳ ನೆನೆನೆನೆದು ಪ್ರೀತಿಸಿದ್ದೆ,

ನಿನ್ನ ಮಾತು, ಆ ಸ್ಪರ್ಶ, ನಿನ್ನ ನಗುವೇ ಅಂದು ನನಗೆಲ್ಲ,
ಸಿಹಿ ಮುತ್ತುಗಳ ನಾ ಪಡೆದ ನಿನ್ನ ನೆನಪುಗಳೇ ಇಂದು ಬದುಕೆಲ್ಲ......!!!



ಪ್ರೀತಿಯಿಂದ:-) ಮಹೇಶ್

ಹೃದಯದ ಮಾತು










ಹೇಳಲೇ ನಿಮಗೊಂದು ಮುದ್ದು ಮನಸ ಮಾತೊಂದು
ನನ್ನೊಲವಿನ ಹೃದಯದಲ್ಲಿ ಮೊಳಕೆಯೊಡೆದ ಆಸೆಯನ್ನು



ಬ್ಯುಸಿಯಾದ ಬದುಕಿನಲ್ಲೂ ನೆನಪಾಗುವ ಕ್ಷಣವನ್ನು
ಹೊನ್ನಿನಂಥ ಜೀವನಕ್ಕೆ ಜೋತೆಯಾದವಳ ಪ್ರೀತಿಯನ್ನು



ಹುಟ್ಟಿದರೂ ನೂರು ಕವನ ಬರೆಯಲಾಗದ ಪದವನ್ನು,
ಭಾವನೆಯ ಬೆಸೆಯುವಂಥ ಸಂಗಾತಿಯ ಸನಿಹವನ್ನು



ಇಚ್ಚಿಸಿದರೂ ಹೇಳಲಾರೆನು ಕ್ಷಮಿಸಿಬಿಡಿ ಈ ಒಂದು ಬಾರಿ ನನ್ನನ್ನು.

ಪ್ರೀತಿಯಿಂದ:-) ಮಹೇಶ್

Tuesday, January 6, 2009

ಪ್ರೀತಿಯ ಕರೆ



ಪ್ರೀತಿಯಿಂದ ಬರೆದೆ ಅಂದು ನನ್ನ ಮನದ ಚಿತ್ರವ,

ಕನಸ ನನಸುಮಾಡಿ ಉಳಿದುಹೋದ ಅವಳ ಅಂತರಂಗವ

ಮಾತು ಮಾತಿಗೂ ಮುದ್ಧು ಮಾಡಿ , ನಿಂತ ನೀರ ಸುಮ್ಮನೆ ಕದಡಿ,

ಕುರುಡಾಗಿದ್ದ ಬದುಕಮೇಲೆ ಚೆಲ್ಲಿ ಹೋದಳವಳು ಬಣ್ಣವ.



ಕದ್ದು ಮುಚ್ಚಿ ಕೊಟ್ಟ ಮನಸು, ಮುನಿಸಿಕೊಂದರವಳು ಹೆಚ್ಚೇ ಸೊಗಸು,

ಅವಳಿರಲು ಸನಿಹದಲ್ಲಿ ಮನಸಿಗೊಂಥರ ಸಂಭ್ರಮ,

ಕಂಡು ಕೊಂಡೆ ಎದೆಯ ಮಿಡಿತ, ತಿಳಿದುಕೊಂಡೆ ಹೃದಯ ಮಿಡಿತ,

ಬಿಡಿಸಿಟ್ಟ ಈ ಮನದ ಚಿತ್ರಕೆ, ಮತ್ತೆ ಜೀವ ತುಂಬ ಲಾರೆಯಾ....?

ಪ್ರೀತಿಯಿಂದ :) - ಮಹೇಶ್