
ಜಿನುಗುತಿದೆ ಮನದಲ್ಲಿ ಪ್ರೀತಿಯ ಸಿಹಿ ಹನಿ,
ಅದು ಅವಳು ಬಿಟ್ಟುಹೋದ ನೆನಪುಗಳ ಜೇನ ಹನಿ,ಇರುಳಲ್ಲಿ ನಾ ಪಡೆದ ಮುತ್ತುಗಳ ಹನಿ ಹನಿ,
ಇದು ಮನಸಿನ ಮಾತುಗಳಿಗೆ ಜೋತೆಯಾದವಳ ಕಹಾನಿ,
ಕನಸುಗಳಲ್ಲೇ ನೆಂದಿದ್ದೆ, ಕಲ್ಪನೆಗಳಲ್ಲೇ ಮಿಂದಿದ್ದೆ,
'ಪ್ರೀತಿಸುವೆ ನಿನ್ನೆ' ಎಂದಾಗ ಜಗವನ್ನೇ ಮರೆತಿದ್ದೆ,
ಪ್ರತಿ ಕ್ಷಣವೂ ಸ್ಮರಿಸಿದ್ದೆ, ಸಿಹಿ ಕನಸುಗಳ ಕಂಡಿದ್ದೆ,
ನನಗಾಗಿ ಕಾದವಳ ನೆನೆನೆನೆದು ಪ್ರೀತಿಸಿದ್ದೆ,
ನಿನ್ನ ಮಾತು, ಆ ಸ್ಪರ್ಶ, ನಿನ್ನ ನಗುವೇ ಅಂದು ನನಗೆಲ್ಲ,
ಸಿಹಿ ಮುತ್ತುಗಳ ನಾ ಪಡೆದ ನಿನ್ನ ನೆನಪುಗಳೇ ಇಂದು ಬದುಕೆಲ್ಲ......!!!
ಪ್ರೀತಿಯಿಂದ:-) ಮಹೇಶ್
1 comment:
Post a Comment